ಭೀಮಸೇನ್ ಕರ್ನಾಟಕ ಸಂಗೀತ ಮತ್ತು ಹಿಂದೂಸ್ತಾನಿ ಸಂಗೀತದಲ್ಲಿ ಒಂದು ರಾಗವಾಗಿದೆ (ಭಾರತೀಯ ಶಾಸ್ತ್ರೀಯ ಸಂಗೀತ ಪ್ರಮಾಣ) ಸಂಗೀತ ಸಂಯೋಜಕ ಮಹೇಶ್ ಮಹದೇವ್ ಸೃಷ್ಟಿಸಿರುವ ರಾಗವಾಗಿದ್ದು. 'ಭಾರತ ರತ್ನ' ಪಂಡಿತ್ ಭೀಮಸೇನ್ ಜೋಶಿ (ಭೀಮ್) ತಾನ್ ಸೇನ್ (ಸೇನ್) ರವರಿಗೆ ಅರ್ಪಿಸಲಾಗಿದೆ. ಇದು ಕರ್ನಾಟಕ ಸಂಗೀತದ 72 ಮೇಳಕರ್ತ ರಾಗ ವ್ಯವಸ್ಥೆಯಲ್ಲಿ 11 ನೇ ಮೇಳಕರ್ತ ರಾಗಂ ಕೋಕಿಲಪ್ರಿಯ ಜನ್ಯ ರಾಗವಾಗಿದೆ. ಮಹೇಶ್ ಮಹದೇವ್ ಎರಡು ಹಿಂದೂಸ್ತಾನಿ ಬಂದಿಶ್ ಮತ್ತು ಮೀರಾ ಭಜನ್ ಅನ್ನು ಸಂಯೋಜಿಸುವ ಮೂಲಕ ಭಾರತೀಯ ಶಾಸ್ತ್ರೀಯ ಸಂಗೀತಕ್ಕೆ ಈ ರಾಗವನ್ನು ಪರಿಚಯಿಸಿದರು. == ರಚನೆ ಮತ್ತು ಲಕ್ಷಣ == ಭೀಮಸೇನ್ ಒಂದು ಅಸಂಪೂರ್ಣ ರಾಗವಾಗಿದ್ದು ಆರೋಹಣದಲ್ಲಿ ರಿಷಭಂ ಮತ್ತು ಧೈವತಮ್ ಅನ್ನು ಹೊಂದಿರುವುದಿಲ್ಲ. ಇದು ಔಡವ-ಸಂಪೂರ್ಣ ರಾಗಂಈ ರಾಗದ ಆರೋಹಣ-ಅವರೋಹಣ ಕೆಳಗಿನಂತೆ. ಆರೋಹಣ: ಸ ಗ₂ ಮ₁ ಪ ನಿ₃ ಸ ಅವರೋಹಣ: ಸ ನಿ₃ ದ₂ ಪ ಮ₁ ಗ₂ ರಿ₁ ಸ ಈ ರಾಗದಲ್ಲಿ ಬಳಸಲಾಗುವ ಸ್ವರಗಳೆಂದರೆ ಷಡ್ಜ, ಸಾಧಾರಣ ಗಾಂಧಾರ, ಶುದ್ಧ ಮಾಧ್ಯಮ, ಕಾಕಲಿ ನಿಷಾದಂ ಮತ್ತು ರಾಗದ ಅವರೋಹಣದಲ್ಲಿ ಶುದ್ಧ ರಿಷಭ ಮತ್ತು ಚತುಶ್ರುತಿ ಧೈವತಂ ಸೇರಿಸಲಾಗುವುದು . ಇದು ಔಡವ - ಸಂಪೂರ್ಣ ರಾಗಂ. == ಸಂಯೋಜನೆಗಳು == 'ಗಿರಿಧರ್ ಗೋಪಾಲ್ ಶ್ಯಾಮ್ ' ರೂಪಕ್ ತಾಳ, ವಿಳಂಬಿತ್ ಮತ್ತು ಮಧ್ಯ ಲಯ ಬಂದಿಶ್ ಬರೆದು ಮಹೇಶ್ ಮಹದೇವ್ ಸಂಗೀತ ಸಂಯೋಜಿಸಿದ್ದಾರೆ ಜಯತೀರ್ಥ ಮೇವುಂಡಿ ಹಾಡಿದ್ದಾರೆ 'ಮನ್ ಕೆ ಮಂದಿರ್ ಆಯೋರ್' ತೀನ್ ತಾಲ್ ದೃತ್ ಬಂದಿಶ್ ಅನ್ನು ಮಹೇಶ್ ಮಹದೇವ್ ಬರೆದು ಸಂಗೀತ ಸಂಯೋಜಿಸಿದ್ದಾರೆ ಜಯತೀರ್ಥ ಮೇವುಂಡಿ ಹಾಡಿದ್ದಾರೆ == ಟಿಪ್ಪಣಿಗಳು ==